ಕಾಡು ಹುರಳಿ

ಲೆಗ್ಯಾಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದ ಒಂದು ಮೂಲಿಕೆ ಸಸ್ಯ. ವಿಸಿಯ ಸೇಟಿವ ಇದರ ಶಾಸ್ತ್ರೀಯ ನಾಮ. ಇಂಗ್ಲಿಷಿನ ಸಾಮಾನ್ಯ ಬಳಕೆಯ ಹೆಸರು ಕಾಮನ್ ವೆಚ್. ಹಸಿ ಮೇವಾಗಿಯೂ ಹಸಿರು ಗೊಬ್ಬರವಾಗಿಯೂ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ತಂಪು ವಾತಾವರಣವಿರುವ ಪ್ರದೇಶಗಳಲ್ಲಿ ಇದನ್ನು ಬೇಸಗೆ ಬೆಳೆಯಾಗಿಯೂ ಉಷ್ಣಪ್ರದೇಶಗಳಲ್ಲಿ ಚಳಿಗಾಲದ ಬೆಳೆಯಾಗಿಯೂ ಕೃಷಿಮಾಡುತ್ತಾರೆ. ಇದು ಉದ್ದವಾಗಿ ನೆಲದ ಮೇಲೆ ಹರಡಿಕೊಂಡು ಬೆಳೆಯುವ ಗಿಡ. ಕಾಯಿಯಲ್ಲಿ ಪ್ರೋಟೀನು ಪ್ರಮಾಣ ಅಧಿಕವಾಗಿದೆ.

(ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ